10ನೇ ತರಗತಿ-ಕನ್ನಡ-ಗದ್ಯ-07-ವ್ಯಾಘ್ರಗೀತೆ - ಲೇಖಕರ ಪರಿಚಯ

 10ನೇ ತರಗತಿ-ಕನ್ನಡ-ಗದ್ಯ-07-ವ್ಯಾಘ್ರಗೀತೆ - ಲೇಖಕರ ಪರಿಚಯ

ಎ. ಎನ್. ಮೂರ್ತಿರಾವ್ ಅವರ ಪರಿಚಯ

ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ:

        ಎ.ಎನ್. ಮೂರ್ತಿರಾವ್ ಕ್ರಿ.ಶ.೧೯೦೦ ರಲ್ಲಿ  ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಇವರ ಪೂರ್ಣಹೆಸರು ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್. 

        ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್  ಪ್ರಾಧ್ಯಾಪಕರಾಗಿ, ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ. 

       ಇವರು-  ಹಗಲುಗನಸುಗಳು. ಅಲೆಯುವ ಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಮಿನುಗು-ಮಿಂಚು, ಪೂರ್ವಸೂರಿಗಳೊಡನೆ, ಚಂಡಮಾರುತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. 

       ಇವರಿಗೆ,  ಚಿತ್ರಗಳು- ಪತ್ರಗಳು ಎಂಬ ಕೃತಿಗೆ ಕೇಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರು ಎಂಬ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿದೆ. 

        ಇವರು ೧೯೮೪ರಲ್ಲಿ ಕೈವಾರದಲ್ಲಿ ಸಮಾವೇಶಗೊಂಡ ೫೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

**********

ಎ. ಎನ್. ಮೂರ್ತಿರಾವ್ ಅವರ ಬಗ್ಗೆ ಹೆಚ್ಚಿನ ಮಾಹಿತಿ



 ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾಯರು)

(ಜನನ: ಜೂನ್. ೧೬, ೧೯೦೦       ನಿಧನ: ೨೪ ಆಗಸ್ಟ್ ೨೦೦೫ 

 ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಬರಿಯ ಶತಾಯುಷಿಯಷ್ಟೇ ಅಲ್ಲದೇ, ಮೂರು

ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ಅತ್ಯಂತ ಅಪರೂಪದ ವ್ಯಕ್ತಿ.

ಮಂಡ್ಯ ಜಿಲ್ಲೆಯ "ಅಕ್ಕಿಹೆಬ್ಬಾಳು" ಅವರ ಜನ್ಮಸ್ಥಳ.

ತಂದೆ-ತಾಯಿಗಳು : ಶ್ರೀಮತಿ ಪುಟ್ಟಮ್ಮ, ಮತ್ತು ತಂದೆಯವರು, ಶ್ರೀ ಎ. ಸುಬ್ಬರಾವ್.

ಹೆಂಡತಿ- ಶ್ರೀಮತಿ ಜಯಲಕ್ಷ್ಮಿ, (ಮೂರ್ತಿರಾಯರ ರಚನೆಗಳಲ್ಲಿ 'ಲಲಿತೆ,' ಯೆಂದು ಸಂಬೋಧಿಸಲ್ಪಡುತ್ತಾರೆ.)

ಮಕ್ಕಳು : ೧. ಎ. ಎನ್. ಸುಬ್ಬರಾಮಯ್ಯ,೨. ಎ. ಎನ್. ನಾಗರಾಜ್,೩. ಎ. ಎನ್ ರಾಮಚಂದ್ರರಾವ್.

ವಿದ್ಯಾಭ್ಯಾಸ :

ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲುಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ. ಎ ; (ಇಂಗ್ಲೀಷ್ ಸಾಹಿತ್ಯದಲ್ಲಿ).

ವೃತ್ತಿ :

೧. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯವೃತ್ತಿ- ೧೯೨೫-೧೯೨೭ ೨. ಮೈಸೂರಿನ

ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ-೧೯೨೭-೧೯೪೦ ೩. ಶಿವಮೊಗ್ಗದ ಇಂಟರ್ಮೀಡಿಯೆಟ್

ಕಾಲೇಜಿನಲ್ಲಿ ಉಪಪ್ರಾಧ್ಯಾಪಕ-೧೯೪೦-೧೯೪೩.

ಗೌರವಕೆಲಸಗಳು :

೧. ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು-೧೯೫೪ ೨. ಅಧ್ಯಕ್ಷ, ಕನ್ನಡ ಸಾಹಿತ್ಯ

ಪರಿಷತ್ತು-೧೯೫೪-೫೬ ೩. ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್

ಛೇರ್ಮನ್ ೪. ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್- ಛೇರ್ಮನ್ ೫.

ಭಾರತೀಯ ಆಕಾಶ್ ವಾಣಿ ಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾಕಮಿಟಿ', ಯ ಸದಸ್ಯರಾಗಿ ೪

ವರ್ಷಗಳಕಾಲ ಸೇವೆ.

ಪ್ರಬಂಧಗಳ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ೧೯೩೭ರಲ್ಲಿ ಇವರ ಮೊದಲ ಕೃತಿ

"ಹೂವುಗಳು"(ಪ್ರಬಂಧ ಸಂಕಲನ) ಪ್ರಕಟವಾಯಿತು. ಎಂಟು ಪ್ರಬಂಧಗಳ ಈ ಸಂಕಲನವು ಇಂದಿಗೂ

ಒಂದು ಮಾದರಿ ಕೃತಿಯಾಗಿದೆ. ವೈಚಾರಿಕ ನಾಸ್ತಿಕವಾದಿಯಾದ ರಾಯರ "ದೇವರು" ಎಂಬ ಕೃತಿಯು ಆಂಗ್ಲ ಭಾಷೆಗೆ ತರ್ಜುಮೆಯಾಗಿ ವಿಶ್ವಪ್ರಸಿಧ್ಧವಾಗಿದೆ.

ಅನುವಾದಗಳು :

·       ಸಾಕ್ರೆಟೀಸನ ಕೊನೆಯ ದಿನಗಳು ( ಪ್ಲೇಟೋನ 'Enthyphro','Crito',Apology',Phaedo' - ಸಂವಾದಗಳ ಅನುವಾದ)

·       ಹವಳದ ದ್ವೀಪ ( ಆರ.ಎಂ.ಬ್ಯಾಲಂಟಯಿನ್ ನ 'The Coral Island' ನ ಸಂಗ್ರಹಾನುವಾದ)

·       ಯೋಧನ ಪುನರಾಗಮನ ( ಅನುವಾದಿತ ಕಥೆಗಳು)

·       ಪಾಶ್ಚಾತ್ಯ ಸಣ್ಣ ಕಥೆಗಳು ( ಅನುವಾದಿತ ಕಥೆಗಳು)

·       ಅಮೆರಿಕನ್ ಸಾಹಿತ್ಯ ಚರಿತ್ರೆ

·       ಇಂಡಿಯ, ಇಂದು ಮತ್ತು ನಾಳೆ ( ಜವಹರಲಾಲ್ ನೆಹರೂರ 'India Today and Tomorrow' ಪುಸ್ತಕದ ಅನುವಾದ)

·       ಚಂಡಮಾರುತ (ಷೇಕ್ ಸ್ಪಿಯರ್ ನ 'The Tempest' ಅನುವಾದ)

ಲಲಿತ ಪ್ರಬಂಧಗಳು

·       ಹಗಲುಗನಸುಗಳು

·       ಮಿನುಗು ಮಿಂಚು

·       ಅಲೆಯುವ ಮನ

·       ಜನತಾ ಜನಾರ್ದನ

·       ಸಮಗ್ರ ಲಲಿತ ಪ್ರಬಂಧಗಳು

·       ಸಮಗ್ರ ಲಲಿತ ಪ್ರಬಂಧಗಳು (ವಿಸ್ತ್ರತ ಆವೃತ್ತಿ)

ರೂಪಾಂತರಗಳು

·       ಆಷಾಢಭೂತಿ ( ಮೋಲಿಯರನ 'ತಾರ್ತುಫ್' ನಾಟಕದ ರೂಪಾಂತರ)

ವಿಮರ್ಶೆ

·       ಷೇಕ್ ಸ್ಪಿಯರ್ - ಪೂರ್ವಭಾಗ

·       ಮಾಸ್ತಿಯವರ ಕಥೆಗಳು

·       ಪೂರ್ವ ಸೂರಿಗಳೊಡನೆ

·       ಸಾಹಿತ್ಯ ಮತ್ತು ಸತ್ಯ

·       ವಿಮರ್ಶಾತ್ಮಕ ಪ್ರಬಂಧಗಳು,

ಇತರ ಕೃತಿಗಳು

·       ಚಿತ್ರಗಳು ಪತ್ರಗಳು

·       ಬಿ.ಎಂ.ಶ್ರೀಕಂಠಯ್ಯ (ವಿಮರ್ಶಾತ್ಮಕ ಜೀವನ ಚರಿತ್ರೆ)

·       ಅಪರವಯಸ್ಕನ ಅಮೆರಿಕಾ ಯಾತ್ರೆ (ಪ್ರವಾಸ ಕಥನ)

·       ಸಂಜೆಗಣ್ಣಿನ ಹಿನ್ನೋಟ ( ಆತ್ಮಚರಿತ್ರೆ)

·       ದೇವರು ( ವಿಚಾರ)

·       ಜನತಾ ಜನಾರ್ದನ ( ಲೇಖನಗಳು)

·       ಗಾನ ವಿಹಾರ ( ಲೇಖನಗಳು)

·       ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ

ಪುರಸ್ಕಾರಗಳು

·      ೧೯೭೪  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  

·      ೧೯೭೭ ಮೈಸೂರು ವಿಶ್ವವಿದ್ಯಾನಿಲಯದ  ಗೌರವ ಡಿ.ಲಿಟ್.

·      ೧೯೭೮  ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಪರವಯಸ್ಕನ ಅಮೆರಿಕಾ ಯಾತ್ರೆ)

·      ೧೯೭೯  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ( ಚಿತ್ರಗಳು ಪತ್ರಗಳು)

·      ೧೯೮೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಚಂಡಮಾರುತ)

·      ೧೯೮೪  ಅಧ್ಯಕ್ಷ ಪದ- ಕೈವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

·      ೧೯೮೪  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

·      ೧೯೯೪ ಪಂಪ ಪ್ರಶಸ್ತಿ

·      ೧೯೯೯ ಮಾಸ್ತಿ ಪ್ರಶಸ್ತಿ

·      ೧೯೯೯ ಭಾರತೀಯ ವಿದ್ಯಾ ಭವನದ ಫೆಲೋಶಿಪ್


Previous Post
Next Post
Related Posts

0 comments: