10ನೇ ತರಗತಿ-ಕನ್ನಡ-ಪದ್ಯ-02-ಹಕ್ಕಿ ಹಾರುತಿದೆ ನೋಡಿದಿರಾ - ಕವಿ ಪರಿಚಯ

 10ನೇ ತರಗತಿ-ಕನ್ನಡ-ಪದ್ಯ-02-ಹಕ್ಕಿ ಹಾರುತಿದೆ ನೋಡಿದಿರಾ - ಕವಿ ಪರಿಚಯ


ದ.ರಾ.ಬೇಂದ್ರೆ ಅವರ ಪರಿಚಯ

(ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ)

    ದ.ರಾ. ಬೇಂದ್ರೆಯವರರು ಕ್ರಿ.ಶ ೧೮೯೬ ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಶ್ರೀಯುತರ ಕಾವ್ಯನಾಮ ಅಂಬಿಕಾತನಯದತ್ತ 

    ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ದ.ರಾ. ಬೇಂದ್ರೆ ಅವರು ಗರಿ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ, ಸೂರ‍್ಯಪಾನ, ನಗೆಯ ಹೊಗೆ, ಸಾಹಿತ್ಯದ ವಿರಾಟ್ ಸ್ವರೂಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. 

    ಬೇಂದ್ರೆಯವರ ಅರಳು-ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಬೇಂದ್ರೆ ಅವರು ೧೯೪೩ರಲ್ಲಿ ಶಿವಮೊಗ್ಗದಲ್ಲಿ ಸಮಾವೇಶಗೊಂಡ ೨೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

********


ಬೇಂದ್ರೆಯವರ ಬಗ್ಗೆ ಹೆಚ್ಚಿನ ಪರಿಚಯ

ಕಾವ್ಯನಾಮ :

ಅಂಬಿಕಾತನಯದತ್ತ

ನಿಜನಾಮ/ಪೂರ್ಣನಾಮ :

ದತ್ತಾತ್ರೇಯ ರಾಮಚಂದ್ರ ಬೇಂದ್ರೆ.

ಜನನ :

೧೮೯೬ ಜನವರಿ ೩೧.

ಮರಣ :

೧೯೮೧ ಅಕ್ಟೋಬರ್ ೨೬.

ತಂದೆ :

ರಾಮಚಂದ್ರ ಬೇಂದ್ರೆ.

ತಾಯಿ:

ಅಂಬವ್ವ

ಜನ್ಮ ಸ್ಥಳ :

ಧಾರವಾಡ

ಪತ್ನಿ :               

ಲಕ್ಷ್ಮೀಬಾಯಿ

ವಿವಾಹವಾದ ದಿನ :

೧೯೧೯ರಂದು ಹುಬ್ಬಳ್ಳಿಯಲ್ಲಿ

ಮಕ್ಕಳು :

ವಾಮನ ಬೇಂದ್ರೆ.

ಮನೆ, ಮನೆತನ :

ಧಾರವಾಡದ ಸಾಧನಕೇರಿಯಲ್ಲಿ, ವೈದಿಕ.


ವಿದ್ಯಾಭ್ಯಾಸ :

ಪ್ರಾಥಮಿಕ :

೧೯೧೩ ರಲ್ಲಿ ಮೆಟ್ರಿಕ್.

ಪ್ರೌಢಶಾಲೆ :


ಪದವಿ:

೧೯೧೮ ರಲ್ಲಿ ಬಿ. ಎ. ಪದವಿ.


೧೯೩೫ ರಲ್ಲಿ ಎಂ. ಎ. ಪದವಿ.


ವೃತ್ತಿ:

* ವಿಕ್ಟೋರಿಯಾ ಹೈಸ್ಕೂಲ್(ಈಗಿನ ವಿದ್ಯಾರಣ್ಯ ಹೈಸ್ಕೂಲ್)ನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭ.

* ನರಬಲಿ ಕವನ ಪ್ರಕಟಿಸಿ ಕೆಲಸ ಕಳೆದುಕೊಂಡು ನಂತರ ಗದಗಿನ ವಿದ್ಯಾದಾನ ಸಮಿತಿ ಶಾಲೆಯ ಮುಖ್ಯ 

   ಅಧ್ಯಾಪಕರಾದರು.

* ೧೯೩೫ರಲ್ಲಿ ಸೊಲ್ಲಾಪುರದಲ್ಲಿ ಐ.ಎ.ವಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.

* ನಿವೃತ್ತಿಯ ನಂತರ ಧಾರವಾಡ ಆಕಾಶವಾಣಿ ಕೇಂದ್ರದ ಸಲಹೆಗಾರರಾಗಿದ್ದರು.

* ೧೯೨೧ರಲ್ಲಿ ಗೆಳೆಯರ ಗುಂಪು ಕಟ್ಟಿ ಸಾಹಿತ್ಯಕ್ಕಾಗಿ ದುಡಿದರು.

* ಜಯಕರ್ನಾಟಕ ಮಾಸಪತ್ರಿಕೆ ನಡೆಸಿದರು.

ಸಾಹಿತ್ಯಕೃತಿಗಳು :

ಕವನ ಸಂಕಲನಗಳು :

೧೯೧೮ ರಲ್ಲಿ ಪ್ರಭಾತ ಪತ್ರಿಕೆಯಲ್ಲಿ ಇವರ ಮೊದಲಕವನ ಬೆಳಗು ಪ್ರಕಟವಾಯಿತು.


೧೯೩೧ರಲ್ಲಿ ಮೊದಲ ಕವನ ಸಂಕಲನ ಪ್ರಕಟವಾಯಿತು.


ಕೃಷ್ಣಕುಮಾರಿ, ಮೂರ್ತಿ, ಗರಿ, ನಾದಲೀಲೆ, ಸಖೀಗೀತ, ಉಯ್ಯಾಲೆ, ಮೇಘದೂತ, ಬೇಂದ್ರೆ ವಾಜ್ಮಯ ದರ್ಶನ, ಗಂಗಾವತರಣ, ಅರಳು ಮರಳು, ಮತ್ತೆ ಶ್ರಾವಣ ಬಂತು.

ನಾಟಕಗಳು :

ಸಾಯೋ ಆಟ, ದೆವ್ವದ ಮನೆ, ಹೊಸಸಂಸಾರ.

ವಿಮರ್ಶಾ ಗ್ರಂಥಗಳು :

ನಿರಾಭರಣ ಸುಂದರಿ, ಕಥಾಸಂಕಲನ, ಸಾಹಿತ್ಯದ ವಿರಾಟ್ ಸ್ವರೂಪ.

ಅನುವಾದಿತ ಕೃತಿಗಳು :

ಶಾಂತಲಾ, ವಿಠಲ ಸಂಪ್ರದಾಯ, ಸಂವಾದ-ಮರಾಠಿ ಯಲ್ಲಿ ರಚಿಸಿದ ಕೃತಿಗಳು.

 ಪ್ರಶಸ್ತಿ ಪುರಸ್ಕಾರಗಳು :-

·  ೧೯೩೫ರಲ್ಲಿ ಮುಂಬಯಿಯಲ್ಲಿ ಕನ್ನಡ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.


·  ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


·  ೧೯೫೮ರಲ್ಲಿ ಇವರ 'ಅರಳು ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.


·  ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


·  ೧೯೭೩ರಲ್ಲಿ 'ನಾಕುತಂತಿ' ಕೃತಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು.


·  ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪಡೆದರು.


·  ೧೯೬೮ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ಲಭಿಸಿತು.


·  ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.




ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :


ಇಳಿದು ಬಾ ತಾಯಿ, ವರಕವಿ ಬೇಂದ್ರೆ- ಸಂಸ್ಮರಣಾ ಗ್ರಂಥ


Previous Post
Next Post
Related Posts

0 comments: