10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಲೇಖಕರ ಪರಿಚಯ

 10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಲೇಖಕರ ಪರಿಚಯ


ಲೇಖಕರ ಪರಿಚಯ: ಡಿ.ಎಸ್.ಜಯಪ್ಪಗೌಡ




ಶ್ರೀ ಡಿ.ಎಸ್.ಜಯಪ್ಪಗೌಡ


    ಡಿ. ಎಸ್. ಜಯಪ್ಪಗೌಡ (೧೯೪೭) ಇವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯವರು. ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಇವರ ಪೂರ್ಣಹೆಸರು. 

    'ಕರ್ನಾಟಕ ಗ್ರಾಮೀಣ ಸಂಸ್ಥೆಗಳು', 'ಕರ್ನಾಟಕದ ಕಡಲಾಚೆಯ ಸಂಪರ್ಕಗಳು', 'ಮೈಸೂರು ಒಡೆಯರು', 'ಜನಪದ ಆಟಗಳು', 'ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು'  ಮುಂತಾದವು ಇವರ ಪ್ರಮುಖ ಕೃತಿಗಳು. 

    'ಕರ್ನಾಟಕದ ಕಡಲಾಚೆಯ ಸಂಪರ್ಕಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಭಾಜನರಾಗಿದ್ದಾರೆ.

Previous Post
Next Post
Related Posts

0 comments: